Navadarshanam: Gandhi’s dream in realization

Dec 10-14th shall remain an evergreen memory in my life.  These 4 days of my life were spent in the environs of one of the most refreshing places I’ve been to so far, and in company of souls that in my view, are far more advanced than the many “realized” swamis who we see flaunting around in their air conditioned convoys.  “Navadarshanam” is a place that I have personally come to associate with everything that denotes respecting our humanity, our nature, and above all our inherent spirituality.

Located about 40 Kms from Bangalore, at the border of Tamil Nadu, just outside of Anekal taluk, in the Gangenahally hamlet of Gummalapuram village, is Navadarshanam.  Spread across nearly 200 acres of land in the Thally forest area, this community has set in motion a revolution, to revive Gandhi’s concept of Swaraj.  Literally meaning – “self-rule” in the truly spiritual sense of the word, its basic tenets can be seen interwoven inextricably with the fabric of Navadarshanam’s existence.  This has been proved by the fact, that to this day, all the food being cooked by the community at Navadarshanam, is being produced in their premises, in an organic manner.  Plastic is not used in its premises, and no chemical products (not even soaps, detergents and utensil cleaners, let alone chemical fertilizers!) are employed.  There is no power being drawn from the state grid.  The power being used is being generated entirely by natural means of wind power, solar energy, bio gas and through plant extracts.  The products that are grown in its premises are all processed in an organic manner, completely devoid of harmful chemicals, and stored in an eco-sensitive way, using natural preservative techniques.  The houses constructed in its premises were built using compressed mud blocks and designed so as to allow maximum light and air to circulate without having need for appliances such as electric fans.

As mentioned earlier, it embodies Gandhiji’s idea of Swaraj, by which, it encourages man to understand and differentiate between his needs and wants.  Once man is capable of bifurcating these two categories, he masters over his wants, subduing them, instead of succumbing to their tyranny.  In the true, spiritual sense, this is “self-rule”.  Gandhi’s vision was to enable the vast population of India to have this spiritual “self-rule” which far exceeds the political independence/self-rule we obtained.  Unfortunately, we as citizens were far too concerned with the nitty-gritty of our mundane existence to pay heed to his ideas, and politics was far too self-absorbed to appreciate this concept.  Gandhi’s “Hind swaraj”, which shocked Nehru’s vision and nepotism for industrialization, soon went into oblivion.  However, a group of people, in quest for alternative living styles that imbibes spirituality and interlaces it with environmentally sensitive practices, while at the same time, maintaining a high quality of Life, rediscovered the ideologies of Swaraj, and out of their sweat, and blood have today constructed a giant edifice – Navadarshanam, that holds aloft – for all mankind to see and understand, how man can still rectify his reckless treatment of Mother Earth, and learn to live in harmony with her.  These group of people, under the leadership of the eminent Sri. Ananthuji have veritably made a remarkable achievement.  The 150 acres of land, that basks now in lush greenery was once a barren land, devoid of vegetation.  One shall never believe its past horror, if they were to see the green cover that now has spread itself far and wide around their premises. 

So what took me to Navadarshanam? Well, call it destiny, or sheer luck.  I had the opportunity to attend an amazing workshop that discusses the confluence of “Science & Spirituality” based on the advances in Quantum Mechanics, specifically the duality of Light.  It is in itself, a subject that deserves a lengthy and separate post, but nevertheless, this workshop provided me the opportunity to be a part of this community, that has left an indelible mark in my heart. 

Swami Vivekananda says, “Perfect sincerity, holiness, gigantic intellect, and an all-conquering will. Let only a handful of men work with these, and the whole world will be revolutionized.” The people living at Navadarshanam, and those responsible for its founding, are but living examples for the above statement.  Navadarshanam’s products are available to be bought at all outlets of “Namdhaari’s fresh” in Bangalore. For more details about the organization, visit www.navadarshanam.org.

Being away from civilization as I knew it, devoid of all forms of advanced communication system, and finally finding some time for myself, amidst all the maddening rush, I was finally able to resolve a lot of questions that had been plaguing my mind.  There was a sense of security, calmness and awakening that one can experience in its environs.  It was as much a spiritual experience as going on a pilgrimage.  I shall have more to share in the coming days… for now.. i just sign off, with a sense of peace, remembering the golden days spent in an organization that is forging a new vision for the upcoming generation, if only we can see!

Cincopa WordPress plugin

Resurrection….

Has there been a moment in your lifetime when there was a startling current that would’ve surged through your spine, which would’ve made you stand up and take notice of the fact that you needed a huge make over?!! Let’s exclude Rakhi Sawant, Himmesh Res-chammiya, and Meghana Naidu from this question.  We are talking of the more mundane mortals such as us, who are concerned with the rigmaroles of our life and constantly striving to find our Neverlands.

I’ve lost count of the number of times I’ve told myself – “From today, I’m a changed man!” which is pretty much everyday because, I do look at the mirror everyday! And no, its not the same me, who was there, 24 hours ago! 🙂 There’z been 24 hours of maturity, 24 hours of experience, 24 hours of memories, 24 hours of calories, 1/24th of an inch of grey hair, LOL.. well u get the idea. So… yeah.. am a changed man everyday of my life!

The question nevertheless is, is the change for good? Every passing day, we set goals for ourselves. Achieving these goals would define us, nay define our very existence.  Goals that are metamorphosising every single moment.  When life is so dynamic, how can goals be stagnant?! Social goals, personal goals, professional goals, and for some of us, spiritual goals too! How many of these goals was I able to achieve today? There have been days when its a bliss to answer this question, and some days when am tongue tied. But it does visit me every night, like a sweet companion to the seeping darkness around me. Sometimes its a lullaby and sometimes its the boogeyman.

Why is it then, that I pine so much for change? Is it to escape boredom from a predictable and mundane life that I may otherwise fall into? Or is there a lofty ideal of self-efficacy that am in pursuit of? Maybe am being a mere show-off? 😉 Whatever it is, I do know that, not wanting it would’ve been painful. Given the option to suffer change or suffer stagnancy, I’d gladly choose the former.  And I can only hope it shall be for good!

There is a new day coming up. Was my today good? I guess so! Am satisfied, and I know that I can go to bed with a smile.  Would I make the best of tomorrow? Possibly! Another 24 hours… and I won’t be the same…. 🙂 There is a resurrection happening every moment. There is a part of me that dies.. a part that is reborn… and yet, its all me.

ಹೊರೆಸಿಕೊಂಬ ನಾಯಿ ಮೊಲನೇನ ಹಿಡಿಯುವುದಯ್ಯ?!!

ಕರ್ನಾಟಕ ರಾಜಕೀಯ ಪರಿಸ್ಥಿತಿ ಹದಗೆಟ್ಟು ಹೋಗಿರುವುದು ಹಳೆಯ ಸುದ್ದಿ.  ಕೊಳೆತ ಶವಗಳ ದುರ್ನಾತವನ್ನು ನಾಚಿಸುವಷ್ಟು ಅವಹೇಳನಕಾರಿಯಾದಂಥ ಬೆಳವಣಿಗೆಗಳು ದಿನೇ ದಿನೇ ಎದುರಾಗುತ್ತಿವೆ. ದೇಶದ ಎದುರಿಗೆ ಮಾನ ಕಳೆದುಕೊಂಡು, ತಲೆ ತಗ್ಗಿಸುವಂಥ ಪರಿಸ್ಥಿತಿಯನ್ನು ತಂದು ಕೊಟ್ಟಿದ್ದಾರೆ, ನಮ್ಮ ರಾಜಕೀಯ ಮುಖಂಡರು. ದೇಶಕ್ಕೇ ಭ್ರಷ್ಟಾಚಾರದ ಗೆದ್ದಲು ಹಿಡಿದಿರುವಾಗ, ಮನೆಯೊಳಗೆ, ಮನೆಯೊಡೆಯನನಿದ್ದಾನೋ ಇಲ್ಲವೋ ಎಂದು ತಿಳಿಯಲು ಹೆಚ್ಚು ಶ್ರಮ ಪಡಬೇಕಿಲ್ಲ. ಹೀಗಿರಬೇಕಾದರೆ, ಈ ರಾಜಕೀಯ ದೊಂಬರಾಟದಲ್ಲಿ ಇನ್ನೊಂದಷ್ಟು ಪಾತ್ರಗಳ ಸೇರ್ಪಡೆ.  ದಯವಿಟ್ಟು ಸ್ವಾಗತಿಸಿ ವೀರಶೈವ ಮಠಾಧೀಶರನ್ನು!

ಕರ್ನಾಟಕ ರಾಜಕೀಯದ ಬೆಳವಣಿಗೆಗಳನ್ನು ಗಮನಿಸಿದರೆ, ಕನ್ನಡಿಗರ ಈಗಿನ ಪರಿಸ್ಥಿತಿಗೆ ಸ್ಫುಟವಾಗಿ ಹಿಡಿದಿರುವ ಕನ್ನಡಿಯಂತಿದೆ. ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೆ, ಯಡಿಯೂರಪ್ಪನವರ ಹುಚ್ಚು ಮುಂಡೆ ಮದುವೆಯಲ್ಲಿ ತಿಂದು ತೇಗುತ್ತಿರುವವರು ಬಹಳಷ್ಟು ಮಂದಿ, ಸ್ವತಃ ಯಡಿಯೂರಪ್ಪ ಕೂಡ! ಮೊಟ್ಟ ಮೊದಲ ಬಾರಿಗೆ ಅಧಿಕಾರ ಸಿಕ್ಕರೆ, ಮನುಷ್ಯನ ಒಳಗಿರುವ ಕುರುಡು ಮೋಹ, ವ್ಯಾಮೋಹ, ದರ್ಪ, ದುರಹಂಕಾರಗಳೆಲ್ಲ ಹೇಗೆ ಬುಸುಗುಟ್ಟು ಹೆಡೆಬಿಚ್ಚುತ್ತವೆ ಎನ್ನುವುದಕ್ಕೆ, ಯೆಡ್ಡಿ ಹಾಗು ಅವರ ಪಾಳೆಯ ಒಂದು ಜೀವಂತ ನಿದರ್ಶನ.  ಕಣ್ಣಿರುವ ಕುರುಡ ಧೃತರಾಷ್ಟ್ರ ಯೆಡಿಯೂರಪ್ಪ. ಅಧಿಕಾರಕ್ಕೆ ಬಂದಂದಿನಿಂದಲೂ, ಕೇವಲ ಅವರಿವರ ಬಯಕೆಗಳನ್ನು,  ವಿದ್ರೋಹಗಳನ್ನು ನಿಭಾಯಿಸುವಲ್ಲೇ ತಲ್ಲೀನರಾಗಿರುವ ಇವರ ಆಡಳಿತ ವೈಖರಿ, ನಪುಂಸಕತೆಯನ್ನು ದ್ಯೋತಿಸುತ್ತದೆ ಎಂದರೆ ಅತಿಶಯೋಕ್ತಿ ಎನಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಬಾರಿ, ಖುರ್ಚಿಯನ್ನು ಉಳಿಸಿಕೊಳ್ಳುವುದರಲ್ಲೇ ಅಧಿಕಾರಾವಧಿಯ ಬಹಳಷ್ಟು ಸಮಯವನ್ನು ಕಳೆದಿರುವ ಮಹಾಶಯರು, ಇತ್ತೀಚಿನ ಬೆಳವಣಿಗೆಯಲ್ಲಿ ತೋರಿಸಿರುವ ಭಂಡತನ, ಹೇಸಿಗೆ ಹುಟ್ಟಿಸುವಂತಿದೆ.

ಜಾತ್ಯಾತೀತತೆಯನ್ನು ಮೆರೆಯುತ್ತೇನೆ ಎಂದು ಕೊಚ್ಚಿಕೊಳ್ಳುವ ಇವರು, ತಮ್ಮ ಅಧಿಕಾರಕ್ಕಾಗಿ ಮಠಾಧಿಪತಿಗಳ ಮೊರೆ ಹೊಕ್ಕು, ಅವರ ಮುಖಾಂತರ, ಜಾತಿಯ ಮಾತನ್ನು ಬೀದಿಗೆ ತಂದಿರುವುದು ಭಯಾನಕ ಬೆಳವಣಿಗೆ.  ಅದಕ್ಕೆ ತಕ್ಕಂತೆ, ಕುಣಿಯುತ್ತಿರುವ ಈ ಲಿಂಗಾಯತ ಮಠಾಧಿಪತಿಗಳ ಜಾಯಮಾನದ ಬಗ್ಗೆ ಮಾತಾಡಲೂ ಮನಸ್ಸು ಬರುತ್ತಿಲ್ಲ.  ನಿಜವಾಗಿ ಹೇಳಬೇಕೆಂದರೆ, ಇವರಲ್ಲಿ ಯಾರೊಬ್ಬರೂ ಲಿಂಗಾಯತ ಸಿದ್ಧಾಂತಗಳ, ಅದರ ಆದರ್ಶಗಳ ಗಾಳಿಯನ್ನೂ ಸೇವಿಸಿದವರಲ್ಲ.  ಇದೇ ಪಂಗಡಕ್ಕೆ ಸೇರಿದ ನನಗೆ, ನಾನು ಲಿಂಗಾಯತ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುವಂತೆ ಪರಿಸ್ಥಿತಿ ನಿರ್ಮಾಣ ಮಾಡಿರುವ ಇವರಿಗೆ, ಯಾವ ಮಾತಿನಲ್ಲಿ ಲೇವಡಿ ಮಾಡಬೇಕು ತಿಳಿಯುತ್ತಿಲ್ಲ!

ಮೂಲತಃ ಬಸವಣ್ಣನವರ ತತ್ವಾಧಾರದ ಮೇಲೆ ರೂಪುಗೊಂಡ ಲಿಂಗಾಯತ ಸಮಾಜ, ದಾಸೋಹವಾಗಲಿ, ಗುರು, ಲಿಂಗ, ಜಂಗಮದ ಮೂಲ ತತ್ವಗಳನ್ನಾಗಲಿ, ಎಲ್ಲೂ ಸ್ಥಿರತೆಯಿಂದ ಪಾಲಿಸುತ್ತಿರುವುದು ಕಂಡು ಬರುತ್ತಿಲ್ಲ. ಮಾಡುತ್ತಿದ್ದರೂ, ಎಲ್ಲೋ ಕೆಲವರು ಮಾತ್ರ, ಎಲೆ ಮರೆಯ ಕಾಯಿಯಂತೆ. ಆದರೆ, ಸಮಾಜದ ಗಣ್ಯರು ಎಂದೆನಿಕೊಳ್ಳುವ ಈ ಮಠಾಧಿಪತಿಗಳ ನಿಜ ಸ್ವರೂಪ ಈ ದಿನಗಳಲ್ಲಿ ಬೆಳಕಿಗೆ ಬಂದಿರುವುದಂತೂ ನಿಜ.  ಬೆಳವಣಿಗೆಯ ಹೆಸರಿನಲ್ಲಿ ಮುಖ್ಯಮಂತ್ರಿಗಳನ್ನು ಉಚ್ಛಾಟಿಸಬಾರದು ಎಂದು ಭೋದಿಸುತ್ತಿರುವ ಈ ನರಿ ಜಾತಿಯ ’ಗುರು’ಗಳು, ಯಾರ ಬೆಳವಣಿಗೆಯನ್ನುವುದನ್ನು ಸ್ಪಷ್ಟಪಡಿಸುತ್ತಿಲ್ಲ. ಅದನ್ನು ಸೂಚಿಸ ಬೇಕಾದ ಅಗತ್ಯವೂ ಇಲ್ಲ.  ರೋಸ್ವುಡ್ ಸಿಂಹಾಸನದ ಮೇಲೆ, ಹಂಸ ತೂಲಿಕಾಕಲ್ಪದಲ್ಲಿ ಕುಳಿತು, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುವ ಈ ಮತಾಧೀಶರು ಹೇಳುವ ಬೆಳವಣಿಗೆ ಯಾವುದೆಂದು ಎಲ್ಲರಿಗೂ ತಿಳಿಯಬಹುದಾದ ವಿಷಯವೆ.

ಭಕ್ತಿಯ ಭಂಡಾರದ ಬಸವಣ್ಣ ಎಲ್ಲಿ? ಅವರು ಸ್ಥಾಪಿಸಿದ ಆದರ್ಶದ ಕೊಲೆ ಮಾಡಿ, ಅದರ ತಿಥಿ ಊಟದಲ್ಲಿ ತಿಂದು ಕುಣಿದು ಕುಪ್ಪಳಿಸುತ್ತಿರುವ ಈ ಹೇಡಿಗಳೆಲ್ಲಿ? ತಮ್ಮ ವ್ಯಕ್ತಿತ್ವಕ್ಕೆ ಬೊಟ್ಟು ಮಾಡಿದ ರಾಜನ ಹಂಗನ್ನು ತೊರೆದು, ಅಧಿಕಾರವನ್ನು ಕಿತ್ತೊಗೆದು, ಹೊರಗೆ ನಡೆದವರು ಬಸವಣ್ಣನವರು, ಅದು ಕಲ್ಯಾಣದ ಕ್ರಾಂತಿ! ಮಾನಕ್ಕಿಂತ ಮಿಗಿಲಾದ ಧನವಿಲ್ಲವೆಂದು, ಕಾಯಕವೇ ಕೈಲಾಸವೆಂದು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು, ನುಡಿಯೊಳಗಾಗಿ ನಡೆದರು ಬಸವಣ್ಣನವರು.  ಆದರೆ, ಈ ಲಿಂಗಾಯತ ಮತಾಧೀಶರು, ರಾಜಕೀಯ ’ಗಣ್ಯ’ರು, ಅವರ ಹೆಸರಿನಲ್ಲಿ ಒಂದು ಇಡೀ ರಾಜ್ಯದ ಜನತೆಯನ್ನೇ ಅಧೋಗತಿಗೆ ಒಯ್ಯುತ್ತಿರುವ ಶೂರರು. ಇದು ಇಂದಿನ ಕರ್ನಾಟಕದ ಕ್ರಾಂತಿ! ಅಂದು ಬಿಜ್ಜಳನ, ಅನೇಕ ಶರಣರ ರಕ್ತ ಹರಿದಿತ್ತು, ಇಂದು, ಕೋಟ್ಯಾಂತರ ಜನರ ರಕ್ತ ಹರಿಯುತ್ತಿದ್ದೆ! ನನ್ನದು ಕುದಿಯುತ್ತಿದೆ.

ಈ ಎಲ್ಲ ನಾಟಕದ ಅಂತ್ಯದಲ್ಲಿ ಎಂದಿನಂತೆ, ರಾಯರು ಬೆಳವಣಿಗೆಯ ಬೊಗಳೆಯನ್ನು ನಾಚಿಕೆಯಿಲ್ಲದೆ ಬೊಗಳಿದರು.  ಪ್ರವಾಹ ಸಂತ್ರಸ್ತರ ಗತಿಯನ್ನೇ ಸುಧಾರಿಸದ ಇವರ ಪೌರುಷಕ್ಕೆ ತಲೆ ಬಾಗಿದೆ ಘನ ಹೈಕಮಾಂಡ್! ಬಸವಣ್ಣನವರ ವಚನದಲ್ಲಿ ಅವರೇ ಹೇಳುವಂತೆ, ಹೊರೆಸಿಕೊಂಬುವ ನಾಯಿ ಮೊಲನೇನ ಹಿಡಿಯುವುದು? ಮಠಾಧೀಶರು, ರಾಜಕೀಯ ಮುಖಂಡರು, ಈ ವರ್ಗದ ನಾಯಿಗಳೇನೋ ಹೌದು, ಇವರನ್ನು ಹೊತ್ತಿರುವ ನತಧೃಷ್ಟ ಮೂರ್ಖರು ನಾವೇ ಎನ್ನುವುದು ನಮಗೇಕೋ ಇನ್ನೂ ಅರಿವಿಗೆ ಬಂದಿಲ್ಲ!

ಶುಭಾಶಯಗಳು ಯಡಿಯೂರಪ್ಪನವರಿಗೆ!

Am Comin’ Up!

Woah! there! Howdy do?!! Working on setting up this space to be more liveable! 😉 So do check back in pardner! 🙂

ಶಬರಿ

ಸುಮಾರು ೫ ವರ್ಷಗಳ ಹಿಂದೆ, ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ಪ್ರದರ್ಶನದಿಂದ ಪ್ರಭಾವಿತನಾಗಿ, ಬರೆದ ಒಂದು ನೀಳ್ಗವನ – ಶಬರಿ. ಅಂದಿನಿಂದ ಇಂದಿನವರೆವಿಗೂ ನನ್ನಿಂದ ಇಂತಹ ಮತ್ತೊಂದು ಕವನದ ರಚನೆ ಸಾಧ್ಯವೆ ಎಂದು ಹಲವಾರು ಬಾರಿ ಮನಸ್ಸು ಯೋಚಿಸಿದ್ದುಂಟು. ಇದೂವರೆವಿಗೂ ಸಾಧ್ಯವಾಗಿಲ್ಲವೆಂಬುದು ಸತ್ಯ. ಮುಂದಿನ ದಿನಗಳಲ್ಲಿ ಭಗವತ್ಕೃಪೆಯಿಂದ ಸರಿಯಾದ ಸ್ಫೂರ್ತಿ ಬಂದೊದಗಿ ಮತ್ತೊಮ್ಮೆ ಇಂತಹ ಕವನ ರಚನೆಯಾಗಲಿ ಎನ್ನುವುದು ಒಂದು ಆಶಯ…..

ಶಬರಿ

ಅಂಕ – ೧

ದಟ್ಟ ಕಾನನದ ಹಸಿರ ಒಡಲಲಿ
ನಲಿದು ಹರಿಯುವ ತುಂಗೆ ದಡದಲಿ
ಮನದಿ ಬೆಳಗುವ ಭಕುತಿ ಬೆಳಕಲಿ
ಹೊಳೆವೆ ಆತ್ಮನ ಧರಿಸಿ ಶಬರಿಯು
ಕಾಯುತಿರುವಳು ರಾಮ ತಾ ಬರುವ ಹಾದಿಲಿ ೧

ದೇಹ ಬಾಗಿದೆ ಕಣ್ಣು ಮಂಜಿದೆ
ಸುಕ್ಕು ಮುತ್ತಿದ ತೊಗಲು ಹೊದ್ದಿದೆ
ಅಮಿತ ಆಶೆಯು ಮನದಿ ಹರಿದಿದೆ
“ಎನ್ನ ರಾಮನು, ಎನ್ನ ದೇವನು, ನಿಜದಿ ಬರುವನು!
ಎನ್ನ ಕಾಣ್ವನು ಎನ್ನ ಕಾಯ್ವನು ಸಕಲ ಸದ್ಗುಣಧಾಮನು” ೨

ದಿನವು ಉದಯಿಪ ರವಿಯ ನೋಡುತ
ಬರುವನೆನ್ನಯ ರಾಮನೆನ್ನುತ
ತನ್ನ ನಿತ್ಯದ ಕರ್ಮ ಗೈವಳು
ಬಿದ್ದ ಹಣ್ಗಳ ಆಯ್ದು ತಿಂಬಳು
ಬಿದ್ದ ಹೂಗಳ ಹಾರ ನೇಯ್ವಳು ೩

ಭರದಿ ಸೂರ್ಯನು ರಥವನೋಯ್ದು
ಮುಳುಗೆ ರುಧಿರದ ಹೊದಿಕೆ ನೇಯ್ದು
ಹರಿಸಿ ಕಂಗಳ ಅಶ್ರುಧಾರೆಯ
ಕೂಗಿ ಕರೆವಳು “ರಾಮ ಬಾರೆಯ?
ಮೊಗವ ತೋರೆಯ? ನಿನ್ನ ಸೇವೆಯ ಭಾಗ್ಯ ನೀಡೆಯ? ೪

ಇಂಥ ನಿರ್ಮಲ ಭಕ್ತಿ ಸೆಳೆತವ
ನೋಡಿ ನಲಿಯಲು ಬಂದ ರಾಘವ
ಕಳೆದ ಸೀತೆಯ ಹುಡುಕೊ ನೆಪದಲಿ
ಬಂದ ದೇವನು ಶಬರಿ ಬಳಿಯಲಿ
ಭಕ್ತಿ ಸುಲಭನು ಪಾತ್ರನಾದನು ಭಕ್ತಳಾ ನಿಜ ಲೀಲೆಲಿ ೫

(ಸುರರು ಮುನಿಗಳು ಹುಡುಕಿ
ಅಲೆಯಲು ಕಾಣದಾ ನಿಜ ಮುಕ್ತಿಯು
ಇಂದು ಬಂದಿದೆ ಶಬರಿ ದ್ವಾರಕೆ
ತೋರೆ ಸುಕೃತದ ಶಕ್ತಿಯು )

ಅಂಕ – ೨

ತನ್ನ ದ್ವಾರಕೆ ಬಂದ ರಾಮನ ಕಂಡಳಾಗ ಶಬರಿಯು
“ಬಾರೊ ಕಂದನೆ! ಎನಿತು ಕರೆವಳು ನಿನ್ನನು ನಿನ್ನ ಅಮ್ಮೆಯು?”
ಆಗ ನುಡಿದನು ಶೇಷ ರೂಪನು ತನ್ನ ಅಣ್ಣನ ಗುಣವನು
“ಕೇಳು ತಾಯೆ, ಎನ್ನ ಅಗ್ರಜನೀತ ರಘುಕುಲ ಸೋಮನು”
“ಎನ್ನ ನಾಮವು ಲಕ್ಷ್ಮಣನೆಂಬರು ನಾನೆ ಈತನ ತಮ್ಮನು” ೬

ಆಹಾ! ಆಹಾ! ಏನಿದೇನಿದು ಇಂಥ ಸೊಗಸಿನ ಅಚ್ಚರಿ
ಶುದ್ಧ ಭಕ್ತಿಗೆ ರಾಮ ಸೇವೆಯು ಲಭಿಸಿದಂತಹ ವೈಖರಿ
ನಾಮ ಕೇಳಿಯೆ ಮಾತು ಹೊರಡದೆ ಅಲ್ಲಿ ಶಬರಿಯು ನಿಂತಳು
ವೇದ ಶಾಸ್ತ್ರಕೆ ಕಾಣದೊಡೆಯನ ಕಣ್ಣ ಮುಂದೆಯೆ ಕಂಡಳು
ಭಕ್ತಿ ಪ್ರೀತಿಯ ಭಾವ ಲಹರಿಲಿ ಆಗ ತಾನು ಮಿಂದಳು ೭

“ಏಕೆ ಅಲ್ಲಿಯೆ ನಿಂತೆ ತಾಯೆ? ಬಾರೆ ಎನ್ನೆಯ ಬಳಿಯಲಿ”
ಎಂದು ರಾಮನು ಕೈಯ ಚಾಚಿದ ಶಬರಿ ಎಡೆಯಲಿ ಪ್ರೀತಿಲಿ
ಊರುಗೋಲನು ಬಿಸುಟು ವೃದ್ಧೆಯು ಆಗ ರಾಮನ ಸೇರಲು
ದೇವದೇವರು ಬಂದು ನಿಂತರು ಇಂಥ ದೃಶ್ಯವ ಕಾಣಲು
ದೇವ ಭಕುತಳ ಯೋಗಮಿಲನದ ಪುಣ್ಯ ಭಾವದಿ ಮೀಯಲು ೮

“ಅಮಿತ ಕಾಲದ ತಪಕೆ ಫಲವನೀವ ಕಾಲವು ಬಂದಿದೆ.
ಕೇಳು ತಾಯೆ ಎಲ್ಲ ಕೊಡುವೆನು ನಿನ್ನ ಮನದೊಳಗೇನಿದೆ?”
ತಾಯಿ ಭಾವವು ಮೂಡಿ ಬಂದಿದೆ ಮೊದಲ ನೋಟದೆ ಮನದಲಿ
ದೇವನೀತಗೆ ಏನ ನೀಡಲಿ ಎಂಬ ದೈನ್ಯತೆ ಜೊತೆಯಲಿ
ದ್ವಂದ್ವ ಭಾವವು ಮೂಡಿ ಹರಿಯಿತು, ಹನಿಯು ಗೂಡಿತು ಕಣ್ಣಲಿ ೯

ಎಲ್ಲ ಅರಿತ ರಾಮಚಂದ್ರನು ಆಗ ಶಬರಿಗೆ ಪೇಳ್ದನು
“ಅಮ್ಮ ನನಗೆ ಹಸಿವೆಯಾಗಿದೆ ನೀಡಲಾರೆಯ ಏನನೂ?”
ಮಾತ ಕೇಳುತ ಮಗುವಿನಂದದಿ ಶಬರಿ ತಾನು ನಲಿದಳು
“ಈಗ ಬರುವೆನು ತಾಳು ಕಂದನೆ” ಎಂದು ರಾಮಗೆ ಪೇಳ್ದಳು
ಜಗವನುಣಿಸುವ ಕಲ್ಪತರುವನು ಉಣಿಸಲೋಸುಗ ಪೋದಳು ೧೦

“ಕೇಳಿ ತರುಗಳೆ ಒಂದು ಬಿನ್ನಪ ಎನ್ನ ದೇವನು ಬಂದಿಹ
ತನ್ನ ಸೇವೆಯ ಗೈವ ಭಾಗ್ಯವ ಇಂದು ಎಮಗೆ ತಂದಿಹ
ಹಸಿದ ರಾಮನ ತಣಿಸಲೋಸುಗ ನೀಡಿ ನಿಮ್ಮೆಯ ಫಲಗಳ
ಪ್ರೀತಿಯಿಂದಲಿ ಇಂತು ಶಬರಿಯು ಕೇಳೆ ಎಲ್ಲ ಮರಗಳ
ಹಣ್ಣ ರಾಶಿಯೆ ಧರೆಗೆ ಇಳಿಯಿತು ಸೇರೆ ರಾಮನ ಕೈಗಳ ೧೧

ತನ್ನ ಸೆರಗಲಿ ಅವನು ತುಂಬುತ ವೃದ್ಧೆ ಶಬರಿಯು ನಲಿದಳು
“ಇಗೋ ದೇವನೆ ಹಣ್ಣ ತಂದೆನು” ಎಂದು ಓಡುತ ಬಂದಳು
ಹಣ್ಣ ರಾಶಿಯ ಕೆಳಗೆ ಸುರಿಯೆ ರಾಮನೊಡ್ಡಲು ಕೈಯನು
“ತಾಳು ರಾಮನೆ! ಏನಿದಾತುರ? ನೋಡ ಬಾರದೆ ಫಲವನು?
ರುಚಿಯದಾವುದು? ಪುಳಿಯದಾವುದು? ತಿಳಿದು ತಿನ್ನು ಹಣ್ಣನು!” ೧೨

ಹಣ್ಣನೊಂದನು ಒರೆಸಿ ರುಚಿಯ ನೋಡೆ ಅದನು ತಿಂದಳು
“ಅಯ್ಯೊ ರಾಮ ಕಹಿ” ಇದೆಂದು ನೀಡಲಾಗದೆ ಬಿಸುಟಳು
ಮತ್ತೆ ಬೇರೆಯ ಹಣ್ಣು ತೆಗೆದು ರುಚಿಸಿ ಚೆನ್ನಿದು ಎನ್ನುತ
ತನ್ನ ಎಂಜಿಲು ಎಂದು ಕಾಣದೆ, ನೀಡೆ “ತಿನ್ನಿದು” ಎನ್ನುತ
ಭಕ್ತವತ್ಸಲ ಮುದದಿ ತಿಂದನು ಮುಗ್ಧ ಭಕ್ತಿಗೆ ಮೆಚ್ಚುತ ೧೩

ಎನಿತು ಸಂತಸ ಜಗವ ತುಂಬಿತು ಸೃಷ್ಟಿ ಚಂದದಿ ನಲಿದಿದೆ
ರಾಮನಿತ್ತಲಿ ಹಣ್ಣ ತಿನ್ನಲು ಜಗದ ಹಸಿವೆಯೆ ಇಂಗಿದೆ!
ಎಂಥ ಪುಣ್ಯದ ಸೊಗಸಿದೆಂದು ಹೇಳೆ ಪದಗಳು ಸಾಲದು
ಬ್ರಹ್ಮ ಇಂದ್ರರೆ ತಪವ ಗೈದರು ಇಂಥ ಭಾಗ್ಯವು ದೊರಕದು
ಕಾಮವಿಲ್ಲದ ಭಕುತಿ ಲಹರಿಯ ಮಹಿಮೆ ಎಂತಹ ಚೆನ್ನದು! ೧೪

ಇನಿತು ಸೇವೆಯ ಪಡೆದ ರಾಮನು “ಕೇಳು ತಾಯೆ ಕಥೆಯನು
ಕಪಟಿ ರಾವಣ ಎನ್ನ ಸೀತೆಯ ಕದ್ದು ಲಂಕೆಗೆ ಒಯ್ದನು!
ಎನಿತು ಅರಸಲಿ ಎನ್ನ ಮಡದಿಯ? ಎನಿತು ಆಕೆಯ ಸೇರುವೆ?”
ಎಂದು ಕೊರಗಿದ ಪ್ರಭುವ ಕಂಡು “ಏಕೆ ಕಂದನೆ ಮರುಗುವೆ?
ಪೋಗು ಪಂಪೆಯ ಮಡಿಲಿನಲ್ಲಿ ಅಲ್ಲಿ ಕಪಿಗಳ ಕಾಣುವೆ ೧೫

“ಅವರ ಸೇರೆ ಸೈನ್ಯ ಕಟ್ಟಿ ಪೋಗು ಸಾಗರ ತೀರಕೆ
ಅದನು ಮೀರೆ ಬಂದು ಸೇರುವೆ ಸ್ವರ್ಣ ನಗರಿಯ ದ್ವಾರಕೆ”
ಇಂತು ರಾಮಗೆ ಯುಕ್ತಿ ಪೇಳುತ ಶಬರಿ ಹಣ್ಗಳನಿತ್ತಳು
ರಾಮ ಸಂತಸದಿಂದೆಲ್ಲವ ತಿನ್ನೆ ಬೆಚ್ಚುತಳೆದ್ದಳು
“ನನ್ನ ಕಣ್ಣೆ ತಗುಲಿತೆನ್ನುತ ದೃಷ್ಟಿಯ ತೆಗೆದಳು ೧೬

ಅಮಿತ ಭಕ್ತಿಯ ಕಂಡ ರಾಮನನುಜ ಕಂಬನಿ ಮಿಡಿದನು
“ಆಹ! ತಾಯೆ! ಇಂದಿಗೆನ್ನೆಯ ಗರ್ವವಿಂಗಿದೆ” ಎಂದನು
“ಎನ್ನ ಭಕುತಿಯೆ ಸರ್ವ ಶ್ರೇಷ್ಠವು ಎಂಬ ಭಾವದಿ ಬೀಗಿದೆ
ದಿಟವದಾವುದು ಸಟೆಯದಾವುದು ಎಂದು ನೀನು ತೋರಿದೆ
ತಿಮಿರ ತುಂಬಿದ ಮನದೊಳಿಂದು ಭಕ್ತಿ ಜ್ಯೋತಿಯ ಬೆಳಗಿದೆ ೧೭

ದೇವ ವರದನು ಪಿಡಿದು ಶಬರಿಯನೆತ್ತಿ ಶಿರವನು ಸವರುತ
“ಹೇಳು ತಾಯೆ ಇನ್ನು ಇಹುದೆ ನಿನ್ನ ಮನದೊಳು ಇಂಗಿತ?
ಸಪ್ತ ಲೋಕವ ತಂದು ನಿನ್ನೆಯ ಪಾದತಳದಲಿ ಹಾಕುವೆ
ದೇವದೇವರ ಸಿರಿಯೆ ಶಚಿಯರ ಕೈಲಿ ಸೇವೆಯ ಗೈಸುವೆ
ಅಖಿಲ ಪುಣ್ಯವ ಸಕಲ ಭಾಗ್ಯವ ನಿನ್ನ ಮಡಿಲಲಿ ಇರಿಸುವೆ ೧೮

ಇಂತು ರಾಘವ ನುಡಿಯೆ ಶಬರಿಯು ನಗುತ ತಲೆಯನು ಆಡಿಸಿ
“ಪುಟ್ಟಿ ಬಂದಿಹುದೆನ್ನ ದೇಹವು ಎನಿತು ಜನುಮವ ಸವೆಯಿಸಿ
ಇನ್ನು ಎನ್ನೊಳು ಮೋಹವಿಹುದೊ ಎಂದು ಕಾಣ್ಬೆಯ ಪರಕಿಸಿ?
ಏಕೆ ಎನ್ನೊಳಗಿಂತು ಕೋಪವು ತೋರಬಾರದೆ ದಯೆಯನು?
ದೇವದೇವನೆ ಸಾಕು ಭವವು ನೀಡು ಮುಕುತಿ ಪದವನು ೧೯

ಅಂಕ – ೩

ನುಡಿಯ ಕೇಳುತ ದಿವಿಜರೊಡೆಯನು ಮನದೆ ಸಂತಸಗೊಂಡನು
ಭಕ್ತಳಿಂಥವಳನ್ನು ಪಡೆದಿಹ ನಾನೆ ಎಂತಹ ಧನ್ಯನು!
ದೈನ್ಯ ಭಾವದೆ ಶಬರಿ ಬಾಗುತ ರಾಮ ಪಾದವ ಪಿಡಿದಳು
ಅಶ್ರುಧಾರೆಯ ಪುಣ್ಯ ಜಲದಲಿ ಹರಿಯ ಚರಣವ ತೊಳೆದಳು
ವಿಶ್ವ ಮೋಹನ ಸತ್ಯ ಸುಂದರ ದಿವ್ಯ ದರ್ಶನ ಪಡೆದಳು ೨೦

ನೋಡ ನೋಡುತ ರಾಮ ದೇಹವು ನೀಲಿ ಆಗಸ ಮುಟ್ಟಿದೆ
ಭುವನವೆಲ್ಲವು ಸಕಲ ಸೃಷ್ಟಿಯು ಹರಿಯ ದೇಹದಿ ಕಂಡಿದೆ
ಶಂಖ ಚಕ್ರವ ಗದೆ ಪದ್ಮವ ಧರಿಸಿದಂತಹ ರೂಪವು
ರವಿಯು ಸಾಸಿರ ಉದಿಸಿಬಂದಿರುವಂಥದೆಂತಹ ದಿವ್ಯವು
ಎಲ್ಲ ದೇವರು ಅಲ್ಲಿ ಸೇರಿರೆ ಹಿಂದೆ ಇಹನಲ ಶೇಷನು ೨೧

ಎಂಥ ಅನುಪಮ ಎಂಥ ಮೋಹಕ ನೀಲ ವರ್ಣದ ದೇಹವು
ಪೂರ್ಣ ಚಂದ್ರಮನಂತೆ ಬೆಳಗುತ ತಂಪನೆರೆಯುವ ತೇಜವು
ಕಮಲ ವದನವು ಮಿನುಗೊ ಕೌಸ್ತುಭ ಜೊತೆಯೊಳಭಯ ಹಸ್ತವು
ನೀಲ ದೇಹದ ಉಡುಗೆ ತೊಡುಗೆಯು ಮಿನುಗೊ ಪೀತದ ವರ್ಣವು
ಪರಮ ಪದದ ರೂಪ ಕಾಣುತ ಶಬರಿ ಕಂಗಳು ತಣಿದವು ೨೨

ತನ್ನ ಶಿರವನು ಪಾದತಳದಲಿ ಇಟ್ಟು ಕಂಬನಿ ಮಿಡಿಯುತ
“ಎಷ್ಟು ಕರುಣೆಯು ದೀನ ಬಂಧುವೆ ನಿನಗೆ ಎನ್ನೊಳು” ಎನ್ನುತ
“ಇಂದಿಗೆನ್ನೆಯ ಜನುಮ ಸಾರ್ಥಕ ಇಂದು ತಪವು ಫಲಿಸಿತು
ವೇದ ಓದದೆ, ಶಾಸ್ತ್ರ ಪೇಳದೆ, ನಿನ್ನ ದರುಶನ ಲಭಿಸಿತು
ರಾಮ ನಾಮದ ಮಹಿಮೆ ಎಂಥದು ಎಂದು ಲೋಕವೆ ಕಂಡಿತು”೨೩

ನಭೆಯು ಪ್ರಭೆಯಲಿ ಬೆಳಗಿ ತೊಳಗಲು ದಿವ್ಯ ಘೋಷವು ಮೊಳಗಿತು
ಪ್ರಾಣ ಜ್ಯೋತಿಯು ದೇಹ ತೊರೆದು ಹರಿಯೊಳೈಕ್ಯವದಾಯಿತು
ಸುರರು ಮುನಿಗಳು ಸಕಲ ದಿವಿಜರು ಪುಷ್ಪ ವೃಷ್ಟಿಯ ಕರೆಯಲು
ಶಬರಿ ದೇಹವೆ ಕರ್ಪೂರವಾಯಿತು ರಾಮಗಾರತಿ ಬೆಳಗಲು
ಇಂತು ಪೇಳ್ವೆನು ಶಬರಿ ಕಥೆಯನು ಭಕುತಿ ಮಹಿಮೆಯ ಸಾರಲು ೨೪

ಮಂತ್ರಕೊಲಿಯನು ತಂತ್ರಕೊಲಿಯನು ದೇವ ಭಕುತಿಗೆ ಸುಲಭನು
ಪ್ರೀತಿಯಿಂದಲಿ ಒಮ್ಮೆ ಕರೆದರೆ ರಾಮನೋಡುತ ಬರುವನು
ಹರಿಯೆ ಎನ್ನೊಳಗಿಂತು ಕುಳಿತು ಕಥೆಯ ಬರೆಸಿಹ ಕರದಲಿ
ಯಾರೆ ಪಾಡಲಿ ಯಾರೆ ಕೇಳಲಿ ರಾಮರಕ್ಷೆಯು ದೊರಕಲಿ
ಭುವನಕೆಲ್ಲಕೆ ಶಾಂತಿ ಸೌಖ್ಯವು ಅಖಿಲ ಸುಕೃತವು ಲಭಿಸಲಿ ೨೫

————–ಶ್ರೀ ರಾಮಕೃಷ್ಣಾರ್ಪಣಮಸ್ತು—————-

ಪುನಶ್ಚೇತನ – ಪುನರುತ್ಥಾನ……

ಸುಮಾರು ೧೦ ತಿಂಗಳ ಹಿಂದೆ ಬರೆದು, ನಂತರ ಹೆಚ್ಚು ಕಡಿಮೆ ಅಸ್ತಿತ್ವವನ್ನೇ ಮರೆತು ಮಲಗಿದ್ದ ಈ ತಾಣಕ್ಕೆ ಪುನಃ ಕಾಯಕಲ್ಪ ಒದಗಿಸಬೇಕು. ವಿಚಿತ್ರ ಅಂತಂದ್ರೆ, ನಾನು ಈ ದಿನಗಳಲ್ಲಿ ಬರೀದೆ ಏನು ಇರ್ಲಿಲ್ಲ…. ಆದರೆ, ಇಲ್ಲಿ ಬರೆಯೋದಕ್ಕೆ ಆಗ್ತಿರ್ಲಿಲ್ಲ ಅಷ್ಟೆ. ಅದರ ಬಗ್ಗೆ ಒಂದು ಅಪರಾಧಿ ಮನೋಭಾವ ನನ್ನಲ್ಲಿ ಈಗಲೂ ಇದೆ. ಈ ಹಿಂದೆ ಬೇಡಿದ್ದ ಆ ಸುಪ್ತ ಚೇತನ ಕಡೆಗೂ ಓ ಗೊಟ್ಟು ಪುನಃ ಸ್ಪಂದಿಸ್ತಾ ಇದೆ. ಇದಕ್ಕೆಲ್ಲ ಸಮಯ ಬರಬೇಕೊ… ಅಥವ ಮನಸ್ಸು ಪಕ್ವವಾಗಬೇಕೋ… ಅಥವ ಇವೆರಡೂ ಒಂದೆನೊ… ನನಗೆ ತಿಳಿದಿಲ್ಲ… ಆದರೆ ಯಾವುದೇ ಕಾರಣಕ್ಕಾಗಲಿ, ಈಗ ಇಲ್ಲಿ ಮತ್ತೆ ಜೀವ ಸ್ಫುರಣೆಯಾಗ್ತಿದೆ.
ಇಲ್ಲಿಗೆ ಬಂದು ಪ್ರೋತ್ಸಾಹ ಕೊಡ್ತಾ ಇದ್ದ ನೀವು, ಬಹುಶಃ ಇದರ ಜಾಡನ್ನ ಮರೆತಿರಬಹುದು…. ನನ್ನ ಪುಣ್ಯಕ್ಕೆ ಮರೀದೆನೂ ಇರಬಹುದು… ಏನೇ ಇರಲಿ… ಅಗಲಿ ಹಾಕಿದ್ದ ಬಾಗಿಲು ಪುನಃ ತೆಗೆದಿದೆ…. ಮರಳಿ ಬಾ ಅತಿಥಿ…. ಹೊಸ ಬಾಳನು ತಾ ಅತಿಥಿ….