ಚಿಲಿಮಿಲಿ ಎಂದೋದುವ ಗಿಳಿಗಳನ್ನು, ಸ್ವರವೆತ್ತಿ ಪಾಡುವ ಕೋಗಿಲೆಗಳನ್ನು, ಎರಗಿ ಬಂದು ಆಡುವ ದುಂಬಿಗಳನ್ನು – “ನೀವು ಕಾಣಿರೇ? ನೀವು ಕಾಣಿರೇ?” ಎಂದು ಬೇಡುತ್ತ, ನಿನ್ನ ಗಂಡನಾದ ಚೆನ್ನಮಲ್ಲಿಕಾರ್ಜುನನನ್ನು ಅರಸಿ ಹೊರಟವಳು ಅಲ್ಲವೆ ನೀನು? ಎಲ್ಲಿಯ ಉಡುತಡಿ, ಎಲ್ಲಿಯ ಶ್ರೀಶೈಲ! ಬೆಂಗಳೂರಿನಿಂದ ೫೦೦ ಕಿ.ಮಿ ಕ್ರಮಿಸುವುದರಲ್ಲಿ ಹದಗೆಟ್ಟ ನಮ್ಮ ಸ್ಥಿತಿ ಎಲ್ಲಿ? ೮೦೦ ವರ್ಷಗಳ ಹಿಂದೆ, ನೀನು ಕ್ರಮಿಸಿದ ಈ ಹಾದಿ ಎಲ್ಲಿ? ನೀನು ನಿಜವಾಗಿಯೂ ಮಾನವ ಮಾತ್ರಳೇ? ಅಲ್ಲಮನ ಎದುರಿಗೆ, ಅಷ್ಟು ಶರಣರ ಸಮ್ಮುಖದಲ್ಲಿ ದಿಟ್ಟವಾಗಿ ಉತ್ತರಿಸಿ, …
Category: ಮಾತು-ಕತೆ
Nov 03
ಪುನಶ್ಚೇತನ – ಪುನರುತ್ಥಾನ……
ಸುಮಾರು ೧೦ ತಿಂಗಳ ಹಿಂದೆ ಬರೆದು, ನಂತರ ಹೆಚ್ಚು ಕಡಿಮೆ ಅಸ್ತಿತ್ವವನ್ನೇ ಮರೆತು ಮಲಗಿದ್ದ ಈ ತಾಣಕ್ಕೆ ಪುನಃ ಕಾಯಕಲ್ಪ ಒದಗಿಸಬೇಕು. ವಿಚಿತ್ರ ಅಂತಂದ್ರೆ, ನಾನು ಈ ದಿನಗಳಲ್ಲಿ ಬರೀದೆ ಏನು ಇರ್ಲಿಲ್ಲ…. ಆದರೆ, ಇಲ್ಲಿ ಬರೆಯೋದಕ್ಕೆ ಆಗ್ತಿರ್ಲಿಲ್ಲ ಅಷ್ಟೆ. ಅದರ ಬಗ್ಗೆ ಒಂದು ಅಪರಾಧಿ ಮನೋಭಾವ ನನ್ನಲ್ಲಿ ಈಗಲೂ ಇದೆ. ಈ ಹಿಂದೆ ಬೇಡಿದ್ದ ಆ ಸುಪ್ತ ಚೇತನ ಕಡೆಗೂ ಓ ಗೊಟ್ಟು ಪುನಃ ಸ್ಪಂದಿಸ್ತಾ ಇದೆ. ಇದಕ್ಕೆಲ್ಲ ಸಮಯ ಬರಬೇಕೊ… ಅಥವ ಮನಸ್ಸು ಪಕ್ವವಾಗಬೇಕೋ… …
Jul 18
ಅಪರಾಧಿ ನಾನಲ್ಲ……..
ಬೆಂಗಳೂರಿಗೆ ವರ್ಗಾವಣೆಯಾಗಿ ಬಂದು ಸುಮಾರು ೩ ತಿಂಗಳಾಯ್ತು! ಬಂದಾಗಿಂದ, ಬ್ಲಾಗಿಗೆ ಬರಗಾಲ ಬಂದಿದೆ ಅಂತ ಅನ್ನಿಸ್ತಿದೆ. ಇದಕ್ಕೆ ಬ್ಲಾಗ್ ಓನರ್ ಕಾರಣ ಅಂತ ಅನ್ಕೊಳ್ಬಾರ್ದು ಅಂತ ನನ್ನ ಸವಿನಯ ಮನವಿ! ಬರೀಬೇಕು ಅಂತ ಬಹಳ ಸರ್ತಿ ಯೋಚನೆ ಮಾಡ್ದೆ, ಆದರೆ, ಯೋಜನೆ, ಯೋಚನೆ ಹಂತದಲ್ಲೇ ನಿಂತ್ಕೊಂಡುಬಿಡ್ಬೇಕೇ!! ಅದಕ್ಕೂ ಕಾರಣ ನಾನಲ್ಲ! ಊರು, ನಮ್ಮೂರಾದ್ರೂ, ಕೆಲ್ಸ ಅಂತ ಇರುತ್ತೆ ನೋಡಿ! ಹೊಸ ಕಡೆ, ಹೊಸ ವಾತಾವರಣ, ಅಲ್ಲಿನ ಬೇಡಿಕೆಗಳು, ಇವೆಲ್ಲ ತಲೆ ತುಂಬ. ಅದೂ ಅಲ್ದೆ, ಆ ಕಾಟ್ …
Jan 30
ಓ ಬಾ ಅತಿಥಿ …..
ಬಹಳ ದಿನಗಳ ಬಯಕೆ ಇವತ್ತು ಪೂರೈಸ್ತು…. ನನ್ನ ಮೊಟ್ಟಮೊದಲ ಕನ್ನಡ ಬ್ಲಾಗ್ ಇವತ್ತು ತೆರೆ ಕಂಡಿದೆ. ಎಷ್ಟೋ ವರ್ಷಗಳಾದ ಮೇಲೆ ಮತ್ತೆ ಬರವಣಿಗೆ ಶುರುವಾಗಿದೆ. ಏನ್ ಬರೀಬೇಕು ಅಂತ ಇನ್ನು ತಿಳಿದಿಲ್ಲ… ಆದರೆ ಅದರ ಚಿಂತೆ ಏನಿಲ್ಲ ಬಿಡಿ… ಮನಸ್ಸಿನ ಮಾತುಗಳಿಗೆನು ಕೊರತೆ ಇಲ್ಲ… ಕಥೆಗಳ ರೂಪದಲ್ಲೋ… ಕವನಗಳ ರೂಪದಲ್ಲೋ… ಹರಟೆ ಆಗಿನೋ… ಕೇಳೋರು ಇರ್ಲಿ.. ಇಲ್ದೆ ಇರ್ಲಿ.. “ಹಾಡುವುದು ಅನಿವಾರ್ಯ ಕರ್ಮ ನನಗೆ” ಅಂತ ಮಾತು ಹೊರಡ್ತಾನೆ ಇರುತ್ತೆ.ಹೀಗೆ ಹೋಗಿ ಬರ್ತಾ… ಒಮ್ಮೊಮ್ಮೆ ಇಣಿಕಿ ನೋಡಿ, …
You say-I say