Category: ಕವನ

ನೀ ನಾನಾದಾಗ….

ನಾನು ನಾನು ಎಂಬ ನಾನಾ ವಿಕಾರಗಳಲಿ ನನ್ನದಿದು ನನ್ನದಾಗಬೇಕೆಂಬ ಕಿಚ್ಚಿನಲಿ ಸುಟ್ಟಿದೆ, ಕರಕಲಾಗಿದೆ, ನೆನಹಾಗಿ ಉಳಿದಿದೆ ನಾನು ನೀನಾಗಿದ್ದ ದಿವ್ಯ ತೇಜಸ್ಸು! ಲೋಗರಾಟದ ಸೋಗು ಹಾಕಿ, ಸಾಧನೆಯ ಅಹಮ್ಮಲಿ ಬೀಗಿ ಆರುವರ್ಣಗಳ ಬಳಿದು, ಅಳಿದು, ತಿಕ್ಕಿ, ತೀಡಿ ಮಾಸಿದೆ, ಸುಕ್ಕಿದೆ, ತೊಗಲಿದು ಹರಿದಿದೆ ನೀನಿಟ್ಟಿದ್ದ ನಿರ್ವರ್ಣ, ಅವರ್ಣವಾಗಿದೆ! ಒಳಗೊಸರುವ ಹರಣ ಹಾಯ್ವ ಕಷ್ಮಲ, ಹೊರಗೆ ಶುಭ್ರ ಸ್ಫಟಿಕ ನಿರ್ಮಲ – ಮಾತಿನೊಸಗೆಯಲಿ ಬೈಚಿಟ್ಟ ಕತ್ತಿಯಲಿ ಕಡಿದಿದೆ ಕೆಡಹಿದೆ ಹಲವಾಗಿ ಹರಡಿದೆ – ನೀಕೊಟ್ಟ ಏಕವನು! ಸಾಕಿಂದು, ಸಾಕಾಗಿಹುದು …

Continue reading

ಇಲ್ಲೇ….ಎಲ್ಲೋ….

ಇಲ್ಲೇ ಎಲ್ಲೋ ಒಡೆದವು ಕೆಲ ಮುತ್ತುಗಳು ಸಂತಸದಿ ಕಳೆದ ಆ ಗೆಳೆತನದ ಹೊತ್ತುಗಳು ಕಾಲನ ಎಳೆದಾಟದಲ್ಲಿ ಹರಿದ ನೂಲಿನ ಎಸಳುಗಳು ಕಣ್ಕವಿದ ಗಾಢಾಂಧಕಾರ, ವಿಸ್ತೃತ ಬಯಲು! ಪೋಣಿಸಲೆಲ್ಲಿ ಹುಡುಕಲಿ? ಇಲ್ಲೇ ಎಲ್ಲೋ ಆರಿದವು ಪ್ರೀತಿ ಪ್ರೇಮಗಳ ದೀಪಗಳು ನಂಬಿಕೆಯ ಬತ್ತಿಯಲಿ ಹೊತ್ತಿಸಿದ ಜ್ಯೋತಿಗಳು ವಿಧಿ ಹೀರಿದ ತೈಲ, ಒಡೆದ ಹಣತೆಯ ಚೂರುಗಳು ಭೋರೆಂದು ಘರ್ಜಿಸುತ ಬೀಸುವ ಬಿರುಗಾಳಿ ಸುತ್ತಲು ಹೊತ್ತಿಸಲೆಲ್ಲಿ ಹೋಗಲಿ? ಇಲ್ಲೇ ಎಲ್ಲೋ ನಾನು ನನ್ನನ್ನೇ ಮರೆತೆನು ಇತಿಹಾಸಕೆ ಮುಖ ಮಾಡಿ ವರ್ತಮಾನವ ಹಳೆದೆನು ಬದುಕಿನ …

Continue reading

ಏಕಾಂತ

ಬಹಳ ವರ್ಷಗಳ ಹಿಂದೆ ಬರೆದಿದ್ದ ಕೆಲವು ಕವನಗಳನ್ನು ಕೆದಕಿ, ಬೆದಕಿ, ಹೊರಗೆ ಹಾಕುತ್ತಿದ್ದೇನೆ. ಬಹಳ ದಿನಗಳಿಂದ, ಕನ್ನಡದಲ್ಲಿ, ಅದರ ಅಂಕಣದಲ್ಲಿ ಏನೂ ಬರೆಯದೆ ಇದ್ದ ಅಪರಾಧಿ ಭಾವವನ್ನು ಸ್ವಲ್ಪ ಶಾಂತವಾಗಿಸಲು ಇದೊಂದು ನೆಪ. ಇಂದೇಕೆ ಮನದಲ್ಲಿ ಮಾರ್ದನಿಪ ನೀರವತೆ? ಸಂತೆ ಮಧ್ಯದಿ ಸೂಸಿ ಬಂದಿಹುದು ನಿರ್ಜನತೆ | ಎಲ್ಲರೂ ಇದ್ದು ಇರದಿರುವಂದದ ಏಕಾಂತ ಇರುವಿಕೆಯೆ ಸೂಳ್ಪಡೆವ ನವವಾದ ಸಿದ್ಧಾಂತ || ಯಾವುದೋ ಒಂದು ನೆನಪಿಂದು ಮರುಕಳಿಸಿ ತಂದಿಹುದು ಭೂತದ ಆತ್ಮಗಳ ಮೇಳವಿಸಿ | ಗತದಂಧಕಾರದಲಿ ಮೌನಗಳ ಉಕ್ಕಿನಲಿ …

Continue reading

ಶಬರಿ

ಸುಮಾರು ೫ ವರ್ಷಗಳ ಹಿಂದೆ, ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ಪ್ರದರ್ಶನದಿಂದ ಪ್ರಭಾವಿತನಾಗಿ, ಬರೆದ ಒಂದು ನೀಳ್ಗವನ – ಶಬರಿ. ಅಂದಿನಿಂದ ಇಂದಿನವರೆವಿಗೂ ನನ್ನಿಂದ ಇಂತಹ ಮತ್ತೊಂದು ಕವನದ ರಚನೆ ಸಾಧ್ಯವೆ ಎಂದು ಹಲವಾರು ಬಾರಿ ಮನಸ್ಸು ಯೋಚಿಸಿದ್ದುಂಟು. ಇದೂವರೆವಿಗೂ ಸಾಧ್ಯವಾಗಿಲ್ಲವೆಂಬುದು ಸತ್ಯ. ಮುಂದಿನ ದಿನಗಳಲ್ಲಿ ಭಗವತ್ಕೃಪೆಯಿಂದ ಸರಿಯಾದ ಸ್ಫೂರ್ತಿ ಬಂದೊದಗಿ ಮತ್ತೊಮ್ಮೆ ಇಂತಹ ಕವನ ರಚನೆಯಾಗಲಿ ಎನ್ನುವುದು ಒಂದು ಆಶಯ….. ಶಬರಿ ಅಂಕ – ೧ ದಟ್ಟ ಕಾನನದ ಹಸಿರ ಒಡಲಲಿನಲಿದು ಹರಿಯುವ ತುಂಗೆ …

Continue reading

ಓ ಸುಪ್ತ ಚೇತನ!

ಹಲವು ತಿಂಗಳುಗಳ ಹಿಂದೆ ಬೇಸರದಲ್ಲಿ ಗೀಚಿದ್ದ ಮೊದಲ ನಾಲ್ಕು ಸಾಲುಗಳು, ಹಳೇ ಹಾಳೆಗಳ ಮಧ್ಯೆ ಸಿಲುಕಿ ಕಳೆದು ಹೋಗಿದ್ದು, ಕಣ್ಣಿಗೆ ಬಿತ್ತು. ಅರೆ ಬರೆಯಾಗಿದ್ದ ಭ್ರೂಣಕ್ಕೆ ಪೂರ್ಣ ರೂಪಕೊಟ್ಟು, ನಿಮ್ಮ ಮುಂದೆ ಇರಿಸಿದ್ದೇನೆ. ಆಗುಹೋಗುಗಳ ನೂಕುನುಗ್ಗಲಿನಲ್ಲಿ ನಾನಿರುವ ನಾನಾಗಹೊರಟಿರುವ ಇಕ್ಕೆಲದಲ್ಲಿ ಬಯಕೆಯಾಮಿಷಗಳ ಗೊಂದಲ ಗೋಜಲು. ಸಿಲುಕಿ ನರಳಿ ಬೆಂಡಾದ ಇರುವನ್ನು ತೊರೆದೆಲ್ಲಿ ಅಡಗಿರುವೆ ಓ ಸುಪ್ತ ಚೇತನ?! ನಿನ್ನೆಯ ನಿರ್ಣಯಕೆ ಇಂದೆನಗೆ ಶಿಕ್ಷೆಯೋ? ಜಡಿದ ಸಂಕೋಲೆಯೊಲು ಹಾರುವ ಪರೀಕ್ಷೆಯೋ? ಅಗ್ನಿಶಿಖೆ ಧರೆಯಾಗಿ ಕೋಲ್ಮಿಂಚು ಮುಗಿಲಾಗಿ ರೋದಿಸುತ ಕನಲಿರುವ …

Continue reading

ನಿಮ್ಮ ನೆನಪಿನಲ್ಲಿ……

೩ ವರ್ಷಗಳ ಹಿಂದೆ, ಮಂಗಳಕ್ಕನ ಮನೆಗೆ ರಜೆಗೆ ಹೋಗಿ, ಅಲ್ಲಿಂದ ಮರಳಿ ಬರುವಾಗ ಹೃದಯ ಭಾರವಾಗಿ ಬರೆದ ಸಾಲುಗಳಿವು….. ನಿಮ್ಮನ್ನೆಲ್ಲ… ಮಂಗಳ… ತ್ರಿವೇಣಿ… ಜ್ಯೋತಿ… ಸುಶ್ಮ… ಮನಸ್ಸು.. ಪದೇ ಪದೇ ನೆನಪಿಸಿಕೊಳ್ತಾಯಿರುತ್ತೆ… ನಿಮ್ಮ ನೆನಪಿಗೆ….ಹೊಸ ಬೆಳಕಿನ ಸುಧೆ ಸವಿಯುವ ಮುಂಜಾನೆಯ ಸಮಯದಿಹೃದಯ ತುಂಬಿ ಬರುತಲಿಹುದು ನಿಮ್ಮ ನೆನಪಿನ ಹರುಷದಿಸಾಗುತಿತ್ತು ಜೀವನ ಗುರಿ ಅರಿಯದಾವುದೋ ಹಾದಿಲಿಅಲ್ಲಿ ನಿಮ್ಮ ಕಂಡು ಬಂದೆ ಮಗುವು ಬರುವ ತೆರದಲಿಎಂತು ಹೋಗುತ್ತಿತ್ತೋ ಅರಿಯೆ ಅರಿವೆ ಕಾಣದಾ ಬದುಕುಈಗ ನಿಮ್ಮ ಪ್ರೀತಿ ಕಿರಣ ಅದಕು ಇದಕು …

Continue reading