Category: ಒಳನೋಟಗಳು

ಅಲ್ಲಮನನರಸುತ್ತಾ…….

ನೆನೆ ಎಂದರೆ ಏನ ನೆನೆವೆನಯ್ಯ!ಎನ್ನ ಕಾಯವೇ ಕೈಲಾಸವಾಯಿತ್ತುಎನ್ನ ಮನವೇ ಲಿಂಗವಾಯಿತ್ತುನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ?ಗುಹೇಶ್ವರ ಲಿಂಗ ಲೀಯವಾಯಿತ್ತು! “ಮಾತೆಂಬುದು ಜ್ಯೋತಿರ್ಲಿಂಗ” – ಆ ಮಾತು ಅಲ್ಲಮರದಾದರೆ! ಪ್ರಭುದೇವರ ಮಾತೆಲ್ಲ ವಚನ, ವಚನವೆಲ್ಲ ಮಾತು. ಅದೊಂದು ಭೋರ್ಗರೆವ ಮಳೆ ಸುರಿದಂತೆ. ಭವದ ಬರಬರ ಬಿಸಿಲಿನಲ್ಲಿ ಝರ್ಝರಿತವಾದ, ಬರಡಾದ ಮನಸ್ಸಿನ ತುಂಬೆಲ್ಲ ಹರಡಿರುವ ಅಜ್ಞಾನದ ಧೂಳನ್ನು ತೊಳೆದು, ’ಶಿವೋಹಂ’ ಎಂಬ ಸುಜ್ಞಾನದ, ಸ್ವಜ್ಞಾನದ ಗಂಗೆಯಾಗಿ ಹರಿದು, ಹಸಿರಾಗಿಸುವ ಅಮೃತವರ್ಷಿಣಿ! ಶಾಲಾ ಪಠ್ಯಪುಸ್ತಕಗಳಲ್ಲಿ, ಅಲ್ಲಮರ ವಚನಗಳನ್ನು ಕಬ್ಬಿಣದ ಕಡಲೆ ಎಂತಲೇ ವಿವರಿಸುತ್ತಿದ್ದನ್ನು …

Continue reading

ಅಕ್ಕನ ಕಾಡಿನಲ್ಲಿ ಸ್ವಗತ…..

ಚಿಲಿಮಿಲಿ ಎಂದೋದುವ ಗಿಳಿಗಳನ್ನು, ಸ್ವರವೆತ್ತಿ ಪಾಡುವ ಕೋಗಿಲೆಗಳನ್ನು, ಎರಗಿ ಬಂದು ಆಡುವ ದುಂಬಿಗಳನ್ನು – “ನೀವು ಕಾಣಿರೇ? ನೀವು ಕಾಣಿರೇ?” ಎಂದು ಬೇಡುತ್ತ, ನಿನ್ನ ಗಂಡನಾದ ಚೆನ್ನಮಲ್ಲಿಕಾರ್ಜುನನನ್ನು ಅರಸಿ ಹೊರಟವಳು ಅಲ್ಲವೆ ನೀನು? ಎಲ್ಲಿಯ ಉಡುತಡಿ, ಎಲ್ಲಿಯ ಶ್ರೀಶೈಲ!  ಬೆಂಗಳೂರಿನಿಂದ ೫೦೦ ಕಿ.ಮಿ ಕ್ರಮಿಸುವುದರಲ್ಲಿ ಹದಗೆಟ್ಟ ನಮ್ಮ ಸ್ಥಿತಿ ಎಲ್ಲಿ? ೮೦೦ ವರ್ಷಗಳ ಹಿಂದೆ, ನೀನು ಕ್ರಮಿಸಿದ ಈ ಹಾದಿ ಎಲ್ಲಿ?  ನೀನು ನಿಜವಾಗಿಯೂ ಮಾನವ ಮಾತ್ರಳೇ? ಅಲ್ಲಮನ ಎದುರಿಗೆ, ಅಷ್ಟು ಶರಣರ ಸಮ್ಮುಖದಲ್ಲಿ ದಿಟ್ಟವಾಗಿ ಉತ್ತರಿಸಿ, …

Continue reading

ಋಣವೆಂಬ ಸೂತಕ

“ಎಲ್ಲ ಮರೆತಿರುವಾಗ….ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ”.. ಕೇಳ್ತಾಯಿದ್ದೆ. ಅದೆಷ್ಟು ಸರ್ತಿ ಈ ಹಾಡು ಕೇಳಿದ್ದೀನೋ, ಲೆಕ್ಕ ಇಟ್ಟಿಲ್ಲ. ಆದರೆ ಪ್ರತೀ ಬಾರೀ ಕೇಳಿದಾಗಲೂ ಹೃದಯ ಭಾರಿ ಆದದ್ದುಂಟು. ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ, ಎಷ್ಟೋ ಕಳಚಿ ಹೋಗುತ್ವೆ, ಆದರೆ ಈ ನೆನಪುಗಳ ಋಣವನ್ನ ಹೆಗಲ ಮೇಲೆ ಹೊರಿಸಿಬಿಟ್ಟು ಹೋಗುತ್ವೆ. ಸಂಬಂಧಗಳೇ ಹೀಗೆ ಅಂತ ಅನ್ಕೊಂಡು ಯಾವುದನ್ನೂ ಅಂಟಿಸಿಕೊಳ್ದೆ ಸುಮ್ನೆ ಇದ್ಬಿಡ್ಬಹುದೇನೋ… ಆದರೆ ಹೃದಯ ಕೇಳ್ಬೇಕಲ್ವ? ಅದಕ್ಕೆ ಈ ನೆನಪುಗಳೂ ಬೇಕು, ಅವು …

Continue reading