೩ ವರ್ಷಗಳ ಹಿಂದೆ, ಮಂಗಳಕ್ಕನ ಮನೆಗೆ ರಜೆಗೆ ಹೋಗಿ, ಅಲ್ಲಿಂದ ಮರಳಿ ಬರುವಾಗ ಹೃದಯ ಭಾರವಾಗಿ ಬರೆದ ಸಾಲುಗಳಿವು….. ನಿಮ್ಮನ್ನೆಲ್ಲ… ಮಂಗಳ… ತ್ರಿವೇಣಿ… ಜ್ಯೋತಿ… ಸುಶ್ಮ… ಮನಸ್ಸು.. ಪದೇ ಪದೇ ನೆನಪಿಸಿಕೊಳ್ತಾಯಿರುತ್ತೆ… ನಿಮ್ಮ ನೆನಪಿಗೆ….
ಹೊಸ ಬೆಳಕಿನ ಸುಧೆ ಸವಿಯುವ ಮುಂಜಾನೆಯ ಸಮಯದಿ
ಹೃದಯ ತುಂಬಿ ಬರುತಲಿಹುದು ನಿಮ್ಮ ನೆನಪಿನ ಹರುಷದಿ
ಸಾಗುತಿತ್ತು ಜೀವನ ಗುರಿ ಅರಿಯದಾವುದೋ ಹಾದಿಲಿ
ಅಲ್ಲಿ ನಿಮ್ಮ ಕಂಡು ಬಂದೆ ಮಗುವು ಬರುವ ತೆರದಲಿ
ಎಂತು ಹೋಗುತ್ತಿತ್ತೋ ಅರಿಯೆ ಅರಿವೆ ಕಾಣದಾ ಬದುಕು
ಈಗ ನಿಮ್ಮ ಪ್ರೀತಿ ಕಿರಣ ಅದಕು ಇದಕು ಎದಕು…
ಮನಕೆ ನಿಲುಕದಾಗಿದೆ ಸಂಬಂಧಗಳ ಈ ಒಗಟು
ಕೂಡಿ ಹುಟ್ಟದಿದ್ದರೂ ಬೆಸೆದಿಹುದು ನೇಹ ಸೊಗಡು
ನಿಮ್ಮ ಕೂಡಿ ಕಳೆದ ಆ ದಿನಗಳ ಸವಿ ನೆನಪು
ಮತ್ತೆ ಮತ್ತೆ ತರುತಲಿಹುದು ಹೊಸ ಕಾಂತಿ ಹೊಳಪು
ಇಂತು ಬಾಳ ಪಯಣ ನಡೆಯೆ ನದಿಯು ಹರಿವ ಚಂದದಿ
ಅಡೆ ತಡೆಗಳ ಹಾದಿ ಮೀರಿ ಸೇರುವಂತೆ ಜಲಧಿ!
ನಿಮ್ಮ ನೆನಹಿನ ಸೊಗಸು ಸೆಳೆಯುತಿರಲು ಮನವನು
ಮತ್ತೆ ಬರುವೆ ನಿಮ್ಮ ಸಂಗ ಸವಿಯೆ ಸ್ನೇಹ ಸವಿಯನು!! 🙂
ಪ್ರೀತಿಯಿಂದ….
ಪ್ರವೀಣ 🙂
2 comments
ನಮ್ಮ ನಿನ್ನ ಸ್ನೇಹ ನೇಹ ಎಂದಿಗೂ ಮುರಿಯದು.
ನೀನು ಮಾತ್ರ ಹೀಗೇ ಬರೀತಿರು, ಮರೆಯದೆ
I did not know you have website. I just now read your write up on passport woes.