ಬಹಳ ದಿನಗಳಾಯ್ತು. ಏನೂ ಬರೆದಿಲ್ಲ… ಆಗಲೆ ಎಲ್ಲಾರ್ ಹತ್ರ ಬೈಸ್ಕೊಳ್ಳೋದಾಗ್ತಿದೆ. ತ್ರಿವೇಣಿ ಆಗಲೆ ಒಮ್ಮೆ ಮುಖಕ್ಕೆ ಮಂಗಳಾರತಿ ಎತ್ತಿದ್ರು. ಸುಮ್ನೆ ಬಾಗಿಲ್ನ ತೆಗೆದಿಟ್ಟು ಹೊರಗೆ ಅಲಿಯೋಕೆ ಹೋಗಿದ್ದೀಯೇನೋ ಅಂತ ಬೇರೆ ಬೈದ್ಲು! ಸರಿ… ಬರೆಯೋಕೇನೋ ಕೂತಿದ್ದಾಗಿದೆ…. ಆದ್ರೆ ಏನ್ ಬರೀಲಿ? ಬರಿ ಅಂತ ಹೇಳೋರು, ಬರೆಯೋಕೆ ಸಲಹೆ ಕೂಡ ಕೊಡ್ಬೇಕಪ್ಪ! ಹೀಗಂತಂದ್ರೆ.. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೆ ನನ್ ಹೆಂಡ್ತಿ ಅಂದ ಹಾಗಾಗುತ್ತೆ. ಯೋಚ್ನೆ ಮಾಡ್ಬೇಕಾದ್ದೆ! ಸ್ವಲ್ಪ ಮನೆ ಕೆಲ್ಸ ಮುಗಿಸ್ತೀನಿ, ಅಷ್ಟರಲ್ಲಿ ಏನಾದ್ರೂ ಹೊಳೆದಿರುತ್ತೆ.
ಅಡಿಗೆ ಏನ್ ಮಾಡೋದು? ನಿನ್ನೆ ತಾನೆ ಅನ್ನ, ಹುಳಿ ಅಂತ ಆಯ್ತು… ಇವತ್ತೂ ಅದನ್ನೇ ಮಾಡ್ಬೇಕು ಅಂದ್ರೆ ಬೋರ್ ಹೊಡೆಯುತ್ತೆ….ಹೌದು… ಈ ಬೋರ್ ಯಾಕೆ ಹೊಡಿಯುತ್ತೆ ಅಂತ? ಸುಮ್ನೆ ಇರೋಕಾಗೊಲ್ವೇನೊ ಅದಕ್ಕೆ! ಅದರ ಹತ್ರ ಹೊಡಿಸ್ಕೊಳ್ಳೋ ಹಣೆಬರಹ ಬೇರೆ ನಂದು! ಚಪಾತಿ ಮಾಡೋದ? ನಾಳೆ ಬೇರೆ ಫ಼್ರೆಂಡ್ ಬರ್ತಿದಾನೆ… ಆಗಲೆ ಮಾಡಿದ್ರಾಗುತ್ತೆ! ಇವತ್ತು ಬಟ್ಟೆ ಬೇರೆ ಒಗೀಬೇಕು… ಸುಮ್ನೆ ನೂಡಲ್ಸ್ ಮಾಡ್ಕೊಳ್ಳೋದು ಒಳ್ಳೇದು! ಬೇಗ ಆದ್ರೂ ಆಗುತ್ತೆ… ಆಮೇಲೆ ಬಟ್ಟೇ ಒಗ್ದು.. ಬರೆಯೋಕೆ ಕೂತ್ಕೋಬಹುದು……
ಬರಿ ನೂಡಲ್ಸ್ ಹೊಟ್ಟೆ ತುಂಬ್ತಿಲ್ವೆ! ಇನ್ನೇನ್ ಮಾಡ್ಕೊಳ್ಳೋದು! ಅನ್ನಕ್ಕೆ ಇಟ್ರೆ ಜಾಸ್ತಿ ಆಗುತ್ತೆ! ಸುಮ್ನೆ ವೇಸ್ಟು. ಬಾಳೆಹಣ್ಣಿಗೆ ಸ್ವಲ್ಪ ಜೇನ್ತುಪ್ಪ ಹಾಕಿ ರಸಾಯನ ಮಾಡ್ಕೊಂಡು ತಿನ್ಬೇಕು ಅಷ್ಟೇ…. ಸುಮ್ನೆ ಹಾಗೇ ಊಟ ಮಾಡೋದ! …. ಲಾಪ್ಟಾಪ್ ನಲ್ಲಿ ಮೂವಿ ನೋಡೋದ…. ಇಲ್ಲ ಪುಸ್ತಕ ಓದೋದ? ಸುಮ್ನೆ ಮೂವಿ ಹಿಡ್ಕೊಂಡ್ರೆ.. ಸಮಯ ಹೋಗೋದೇ ಗೊತ್ತಾಗೊಲ್ಲ… ಬಟ್ಟೆ ಬೇರೆ ಒಗೀಬೇಕು. ಬುಕ್ ಓದೋದು.. ಬೆಸ್ಟು… ಯಾವ್ದನ್ನ ಓದ್ಲಿ?….. ಪಿ.ಜಿ. ವೋಡ್ ಹೌಸ್ ದು ಇದೆ… ಅದನ್ನ ನಿದ್ದೆ ಮಾಡ್ಬೇಕಾದ್ರೆ ಓದೋದು.. ಒಳ್ಳೇದು… ಸಕ್ಕತ್ ಅಲ! ನಿದ್ದೆ ಮಾಡ್ಬೇಕಾದ್ರೆ.. ಓದೋಕೆ ಆಗುತ್ತ! ಅದೇನ್ ಮಾತೋ! ನಿದ್ದೆ ಮಾಡೋಕೂ ಮುಂಚೆ ಓದಿದ್ರಾಯ್ತು! ಊಟ ಮಾಡೋ ಸಮಯದಲ್ಲಿ ಊಟಕ್ಕೆ ಗಮನ ಕೊಡ್ಬೇಕಂತೆ… ಕಷ್ಟ.. ಕಷ್ಟ….ಯಾವ್ದೂ ಬೇಡ…ಸುಮ್ನೆ ಹಾಡು ಹಾಕ್ಕೊಂಡು… ಕೇಳೋಣ…. “ನೀರಿನಲ್ಲಿ ಅಲೆಯ ಉಂಗುರ… ಭೂಮಿ ಮೆಲೆ ಹೂವಿನುಂಗುರ… “… ಸಕ್ಕತ್ ಹಾಡು.. ಚೆನ್ನಾಗಿದೆ.. ಚೆನ್ನಾಗಿದೆ… “ಮನ ಸೆಳೆದ ನಲ್ಲ.. ಕೊಟ್ಟನಲ್ಲ.. ಕೆನ್ನೆ ಮೇಲೆ ಪ್ರೀತಿಯುಂಗುರ..” ಏನ್ ಲೈನ್ಸು! ಸಕ್ಕತ್ ಅಲ… ಹುಡುಗಿ.. ಹೇಳಿದ್ರೆ.. ಪರ್ವಾಗಿಲ್ಲ…. ಇದೇನಿದು.. ಹುಡುಗನೂ ಅದನ್ನೇ ಹೇಳ್ತಿದಾನೆ!! ಎಡ್ವಟ್ಟು…. ಬರೀ ಉಂಗುರನೇ ಇದೆ.. ಹಾಡಿನ್ತುಂಬ…. ಹೆ ಹೆ ಹೆ.. “ಆಗಿ ನಿನ್ನ ಕೈಯ ಪಂಜರ… ನನ್ನ ಹೃದಯ ಒಂದು ಡಂಗುರ”…. ಉಂಗುರಗೆ.. ಹೊಂದ್ಲಿ.. ಅಂತ.. ಬರೆದ್ರು.. ಅನ್ಸುತ್ತೆ… ಒಳ್ಳೇ ತಮಾಷೆ!! ಹೆ ಹೆ ಹೆ….
ಅಯ್ಯೋ!! ಟೈಮ್!! ಛೆ! ಮರ್ತೇ ಹೋಯ್ತು! ಬಟ್ಟೆ ನನೆಸಿ ಎಷ್ಟು ಹೊತ್ತಾಯ್ತು!!! ರಾತ್ರಿ ಬೇರೆ… ಮತ್ತೆ ನಿದ್ದೆ ಮಾಡೋದು ಲೇಟ್ ಆಗುತ್ತೆ… ಆಮೇಲೆ ಏಳೋದು.. ಲೇಟು… ದಡ ಬಡ ಅಂತ.. ಮತ್ತೆ ಓಡೋದು ಕೆಲ್ಸಕ್ಕೆ… ಸರಿ ಇಲ್ಲ… ಎಷ್ಟು ದಿನದಿಂದ… ಜಾಗಿಂಗ್ ಹೋಗೋಣ ಅಂತ ಅನ್ಕೊಳ್ತಿರೋದು! ನೀನು ಹೋಗೊಲ್ಲ.. ಅದು ಆಗೊಲ್ಲ ಬಿಡು! ಅದೂ ಬೀಚ್ಗೆ ಹೋಗಿ ಜಾಗಿಂಗ?!! ದೇವ್ರಿಗೇ ಪ್ರೀತಿ! ಛೆ! ಛೆ! ನಾನೇ ಹೀಗಂನ್ಕೊಂಡ್ರೆ!! ನೋ ವೇ! ಮಾಡೋಣ.. ಮಾಡೋಣ… ಟೈಮ್ ಬರುತ್ತೆ… ಕಾಲ ಬರ್ಬೇಕು ಅಷ್ಟೆ… ಈಗ ಮನೆ ಕೆಲ್ಸ ಮಾಡ್ತಿಲ್ವ! ಅದೇ ಜಾಗಿಂಗ್ ಥರ ಅಂತ ಅನ್ಕೊಳ್ಳೋದಪ್ಪ! ಈಗ್ಲೇ ಎಷ್ಟು ಸಣ್ಣ ಆಗಿದೀನಿ… ಇನ್ನೇನ್ ಆಗ್ಬೇಕು… ಬೈಸೆಪ್ಸ್ ಬರ್ಬೇಕು ಅಷ್ಟೇ… ಅದೂ ಬರುತ್ತೆ…
ಈ ಬಟ್ಟೆ ಒಗೆಯೋ ಕೆಲ್ಸ ಬೇರೆ! ಇದೆಲ್ಲ ನೋಡಿದ್ರೆ.. ಬಟ್ಟೆ ಯಾಕೆ ಬೇಕಿತ್ತು ಅನ್ಸುತ್ತೆ! ಒಂದು ವಾಷಿಂಗ್ ಮಷಿನ್ ತಗೊಳ್ಳೋಣ ಅಂದ್ರೆ.. ಬಡ್ಡೀ ಮಗಂದು.. ಕಂಪನಿ.. ಕೊಡೋ ಸಂಬ್ಳದಲ್ಲಿ.. ಅದಕ್ಕೆಲ್ಲಿ ಹೋಗ್ಲಿ! ದಿನಾ ಅನ್ಕೊಳ್ಳೋದು.. ಸ್ವಲ್ಪ ಸ್ವಲ್ಪ.. ನಿತ್ಯ ಒಕ್ಕೋಳೋಣ ಅಂತ.. ಬರೀ ಅನ್ಕೊಳ್ಳೋದೇ ಆಗ್ತಿದೆ.. ಬಿಡು… ಬೇಗ ಒಗ್ದು.. ಅದೇನ್ ಬರೆಯೋದೋ.. ಯೋಚ್ನೆ ಮಾಡ್ಬೇಕು… ತಲೆನೇ ಓಡ್ತಿಲ್ಲ… ಸರಿ ಹೋಯ್ತು.. ಫೋನ್ ಬಂತು… ಕೈಯೆಲ್ಲ.. ಒದ್ದೆ… ಹೇಗೆ ಎತ್ಕೊಳ್ಳೋದು… ಯಾರೋ ಏನ್ ಕಥೆನೋ… ಆಮೇಲೇ ನೋಡಿದ್ರಾಯ್ತು… ಬಟ್ಟೆ ಒಣಗಿ ಹಾಕ್ಬೇಕು… ಮೊದ್ಲು. ಅಪ್ಪ! ಅದೇನ್ ಕೈ ನೋವು!! ಅದ್ಯಾವಾಗ.. ಈ ಜಾಗದಿಂದ ತಪ್ಪಿಸ್ಕೊಳ್ತೀನೋ!! ದೇವ್ರಿಗೇ ಗೊತ್ತು…
ಏನ್ ಬರೆಯೋದು… ಛೆ! ಮೊದ್ಲು.. ಎಷ್ಟೊಂದು.. ಬರೀತಿದ್ದೆ… ಕಂಬಿ ಇಲ್ದೆ ರೈಲ್ ಬಿಡ್ತಿಯ ಅಂತ ಹೇಳಿದ್ರು.. ಲೆಚ್ಚರರ್! ಈಗ.. ಕಂಬಿ ಹಾಕಿದ್ರು.. ರೈಲು.. ಪ್ಲಾಟ್ಫ಼ಾರ್ಂ ಬಿಟ್ಟು ಮುಂದಕ್ಕೇ ಹೋಗ್ತಿಲ್ಲ… ತಲೆ ತುಂಬ.. ಬರೀ ಅದೂ ಇದೂ.. ಹರಟೆ… ಎಲ್ಲಿಂದ ಬರ್ಬೇಕು ಐಡಿಯಾ?!! ಸಕ್ಕತ್ ಅಲ… ತಲೆನೋವು ಬೇರೆ… ದುರ್ಭಿಕ್ಷದಲ್ಲಿ ಅಧಿಕಮಾಸವಂತೆ…. ಅಂದ್ರೆ.. ನನ್ ತಲೆ ನಲ್ಲಿ ಮಾಸ್ ಜಾಸ್ತಿ ಆಯ್ತು ಅಂತ… ಎಲ್ಲಿ ತೆಗೀಲಿ ಮಾಸ್ ನ! ಏನ್ ಯೋಚನೆಗಳಪ್ಪ.. ಲಂಗು.. ಲಗಾಮಿಲ್ದಿರಾನೇ ಓಡ್ತಿರುತ್ತೆ…. ಇವತ್ತು ಬೇಡ… ನಾಳೆ ಸ್ವಲ್ಪ ಸೀರಿಯಸ್ಸಾಗಿ.. ಯೋಚ್ನೆ ಮಾಡಿ.. ಏನಾದ್ರೂ ಬರೆಯೋಣ….. ಈಗ ನಿದ್ದೆ ಮಾಡಿದ್ರಾಯ್ತು…
Mar 11
6 comments
Skip to comment form
ಮನೆ, ಅಡುಗೆ, ಬಟ್ಟೆ, ಪಾತ್ರೆ… ಅವೆಲ್ಲ ಕೆಲ್ಸಗಳು ಮತ್ತೆ ಸುಮ್ನೆ ಆಗತ್ವಾ? ಅಮ್ಮ-ಅಕ್ಕ-ಅತ್ತಿಗೆಯರನ್ನ ಏನಂತ ಅಂದ್ಕೋತೀ, ಈಗ ಹೇಳಪ್ಪ!
ನಾಳೆಗೆ ಕಾದೇ ಇರ್ತೀವಿ, ಮತ್ತೆ!!
ಹಳಿ ಇಲ್ಲದೆ ರೈಲು ಬಿಡೋದು ಅಂದ್ರೆ ಇದೇ! ಟಾಪಿಕ್ ಇಲ್ಲದೇನೆ ಭಾಷಣ ಬಿಗಿದಂಗೆ.
ಅಂತೂ ಏನೋ ಬರೆದೆಯಲ್ಲಾ. ನಾಳೆ ಅದೇನು ಸೀರಿಯಸ್ ಆಗಿ ಬರೀತೀಯೋ ನೋಡ್ತೀನಿ ಬಂದು…
ಹೋಳಿ ನಿನ್ನ ಒಂಟಿ ಬಾಳಿಗೆ ಬಣ್ಣ ತರಲಿ 🙂
ಏನೋ, ಆವತ್ತು ನಿದ್ದೆ ಮಾಡಿದೋನು, ಇನ್ನೂ ಎದ್ದಿಲ್ವಾ?
ಡಾಕ್ಟರನ್ನ ಕರೀಬೇಕಾ? ಕಿನ್ನರೀನ ಕರೀಬೇಕಾ?
@ಸುಪ್ತದೀಪ್ತಿ: ಅಬ್ಬ! ಸದ್ಯ ನಾನೆಲ್ಲಿ ಹೇಳ್ದೆ ಅವರೆಲ್ಲ ಕಮ್ಮಿ ಕೆಲ್ಸ ಮಾಡ್ತಾರೆ ಅಂತ!! ನಾನು ಅವರೆನ್ನಲ್ಲ.. ಸೂಪರ್ ವುಮೆನ್ ಅಂತಾನೇ ಅನ್ಕೊಂಡಿರೋದು!! 😉 (ಮನಸ್ಸಿನಲ್ಲಿ) ಸದ್ಯ ಬೀಸೋ ದೊಣ್ಣೆ ತಪ್ಪಿಸ್ಕೊಳ್ಬೇಕು ಮೊದ್ಲು!
@ಶ್ರೀತ್ರೀ: ಹೆಹೆಹೆ! ಟಾಪಿಕ್ ಇಲ್ಲ ಅಂತಾನೇ ಇಷ್ಟೆಲ್ಲ ಬರ್ದಿದ್ದು!!! 😉 ಏನೋ ನಿಮ್ಮ ಹಾರೈಕೆ ಇಂದ ನೋಡೋಣ ಅದೆಷ್ಟು ಬಣ್ಣ ಬರುತ್ತೆ ಅಂತ!!
hello hero..
IF you find a girl, its no assurance that that someone will clean up after you , but she will surely find a way to squeeze a washing machine out of your tight budget! think about it..
baaLe haN-jentuppa is one of all time fav filler foods.
aside: watch dev d, actually listen to the music first..then write about it. bollywood has finally made an attempt to reach hollywood standards. if u liked page 3 you’ll love dev d.
-s