ಓ ಬಾ ಅತಿಥಿ …..

ಬಹಳ ದಿನಗಳ ಬಯಕೆ ಇವತ್ತು ಪೂರೈಸ್ತು…. ನನ್ನ ಮೊಟ್ಟಮೊದಲ ಕನ್ನಡ ಬ್ಲಾಗ್ ಇವತ್ತು ತೆರೆ ಕಂಡಿದೆ. ಎಷ್ಟೋ ವರ್ಷಗಳಾದ ಮೇಲೆ ಮತ್ತೆ ಬರವಣಿಗೆ ಶುರುವಾಗಿದೆ. ಏನ್ ಬರೀಬೇಕು ಅಂತ ಇನ್ನು ತಿಳಿದಿಲ್ಲ… ಆದರೆ ಅದರ ಚಿಂತೆ ಏನಿಲ್ಲ ಬಿಡಿ… ಮನಸ್ಸಿನ ಮಾತುಗಳಿಗೆನು ಕೊರತೆ ಇಲ್ಲ… ಕಥೆಗಳ ರೂಪದಲ್ಲೋ… ಕವನಗಳ ರೂಪದಲ್ಲೋ… ಹರಟೆ ಆಗಿನೋ… ಕೇಳೋರು ಇರ್ಲಿ.. ಇಲ್ದೆ ಇರ್ಲಿ.. “ಹಾಡುವುದು ಅನಿವಾರ್ಯ ಕರ್ಮ ನನಗೆ” ಅಂತ ಮಾತು ಹೊರಡ್ತಾನೆ ಇರುತ್ತೆ.


ಹೀಗೆ ಹೋಗಿ ಬರ್ತಾ… ಒಮ್ಮೊಮ್ಮೆ ಇಣಿಕಿ ನೋಡಿ, ಹಿಡಿಸೋ ಮಾತುಗಳಿದ್ರೆ ಬನ್ನಿ, ಸ್ವಲ್ಪ ಹೊತ್ತು ಸಮಯ ಕಳೆಯೋಣ. ಸಂವಾದದಲ್ಲಿ … ಹಾಗೆ “ಸಂ”ವಾದಗಳೂ ಆಗಬಹುದೇನೋ!! 😉 ಆಗಲೀ! ಅದಕ್ಕೇನಂತೆ? ಅಲ್ವಾ?! ಮುಖ್ಯವಾಗಿ “ಸ್ಫಟಿಕದ ಸಲಾಕೆಯಂತಿರಬೇಕು”, “ಮುತ್ತಿನ ಹಾರದಂತಿರಬೇಕು”.


ಯಾವುದರ ಬಗ್ಗೆ ಹರಟೆ ಹೊಡೆಯೋಣ ಅಂತ ಕೇಳ್ತೀರಾ? ಹರಟೆಗೆ ಎಂತದ್ರೀ ವಿಷಯ ಅಲ್ವೇ? ಮನಸ್ಸಿಗೆ ಹಿಡಿಸಿದ ಹಾಡುಗಳಿಂದ ಹಿಡಿದು… ಹಿಡಿಸದ ವಿಷಯಗಳ ಬಗ್ಗೆ, ರವಿ ಮುಟ್ಟಿದ್ದು.. ಕವಿ ಕಂಡಿದ್ದರ ಬಗ್ಗೆ, ಒಂದೆ ಎರಡೇ… “ಈ ಸಂಭಾಷಣೆ … ನಮ್ಮಇ-ಸಂಭಾಷಣೆ .. ಅತಿ ನವ್ಯ … ರಸ ಕಾವ್ಯ.. ಮಧುರ.. ಮಧುರ .. ಮಧುರ”ವಾಗಿರಲಿ ಅನ್ನೋದೇ ಉದ್ದೇಶ.

ಮನೆ ತೆರೆದಿದೆ… ಅತಿಥಿಗಳಾಗಿ ಒಳಗೆ ಬನ್ನಿ… ಮನೆಯವರಾಗಿ ಇಲ್ಲೇ ಉಳೀತೀರ ಅನ್ನೋ ಆಸೆಯಿಂದ ಬಾಗಿಲನ್ನ ತೆರೆದಿದ್ದೇನೆ. 🙂

6 comments

Skip to comment form

    • ಸುಪ್ತದೀಪ್ತಿ suptadeepti on January 30, 2009 at 8:38 PM
    • Reply

    Well done BOY!

    ಮನೆ ತೆರೆದಿದ್ದಾಯ್ತು. ಇನ್ನು ಒಂದೊಂದಾಗಿ ಪರಿಕರಗಳು ತುಂಬಿದರಾಯ್ತು. ನಾವೇನು ಬರ್ತಾನೇ ಇರ್ತೀವಿ.
    -ಜ್ಯೋತಿ

    • sritri on January 30, 2009 at 8:47 PM
    • Reply

    ಪ್ರವೀಣ ,

    ತುಂಬ ಸಂತೋಷವಾಯಿತು. ತೆರೆದಿದೆ ಮನೆಗೆ ನಾನಂತೂ ರೆಗ್ಯುಲರ್ ಅತಿಥಿ 🙂

    ಶುಭಾಶಯಗಳು.

    • Mangala on January 31, 2009 at 1:32 AM
    • Reply

    Great!!!!!!!!!! Now I am also getting inspired 🙂

    • Guru on February 15, 2009 at 6:58 PM
    • Reply

    ಆವರೂಪದೊಳು ಬಂದರು ಸರಿಯೇ
    ಆವವೇಷದೊಳು ನಿಂದರು ಸರಿಯೇ
    ನೇಸರುದಯದೊಳು ಬಹೆಯಾ ಬಾ
    ತಿಂಗಳಂದದಲಿ ಬಹೆಯಾ ಬಾ…

    Guru

    • ಸುಪ್ತದೀಪ್ತಿ suptadeepti on February 19, 2009 at 1:03 AM
    • Reply

    ಏನ್ ಮರೀ, ಬನ್ನಿ ಅಂತ ಕರ್ದ್’ಬಿಟ್ಟು ನೀನೇ ನಾಪತ್ತೆ! ಎಲ್ ಹೋದಿ?

    • Praveen on February 27, 2009 at 7:23 PM
    • Reply

    ತೆರೆದಿದೆ ಮನೆ ಓ ಬಾ ಅತಿಥಿ! ಹೊಸ ಬೆಳಕಿನ … ಹೊಸ ಗಾಳಿಯ… ಹೊಸ ಬಾಳನು ತಾ ಅತಿಥಿ 🙂

    ಜ್ಯೋತಿ ಅವರೆ, ನೋಡಿ, ಪುನಃ ಬರೀತಿದೀನಿ 🙂 ಸ್ವಲ್ಪ ಕೆಲ್ಸ ಜಾಸ್ತಿ ಆಗಿತ್ತು.. ಈಗ ಮತ್ತೆ ಇಲ್ಲಿ … ವಾಪಸ್! 🙂

Leave a Reply

Your email address will not be published.

Time limit is exhausted. Please reload CAPTCHA.

This site uses Akismet to reduce spam. Learn how your comment data is processed.